Select Your Language

Notifications

webdunia
webdunia
webdunia
webdunia

ಬೇಲಿ

ಕನ್ನಡ ಜೋಕ್
ಪಕ್ಕದಲ್ಲಿದ್ದ ಸ್ಮಶಾನಕ್ಕೆ ಬೇಲಿ ಇರಲಿಲ್ಲ. ಒಮ್ಮೆ ಆ ಊರಿನ ಪಟೇಲರು ತಿಮ್ಮನನ್ನು ಕರೆದು ನೋಡು ತಿಮ್ಮ ನಮ್ಮೂರಿನ ಸ್ಮಶಾನಕ್ಕೆ ಬೇಲಿಯೇ ಇಲ್ಲ. ನೀವೆಲ್ಲಾ ಸೇರಿ ಮನಸ್ಸು ಮಾಡಿದರೆ ಒಂದು ಬೇಲಿ ನಿರ್ಮಿಸುವುದು ಕಷ್ಟವೇನಲ್ಲ ಎಂದು ಹೇಳಿದರು.

ತಿಮ್ಮನಿಗಂತೂ ಸಖತ್ ಕನ್ಫ್ಯೂಸ್. ಅಲ್ಲಾ ಸ್ವಾಮಿ ಹೊರಗೆ ಹೋದವರು ಒಳಗೆ ಬರಲ್ಲ ಒಳಗೆ ಹೋದವರು ಹೊರಗೆ ಬರಲ್ಲ ಮತ್ಯಾಕೆ ಸ್ಮಶಾನಕ್ಕೆ ಬೇಲಿ ಎಂದು ತನ್ನ ಸಂದೇಹವನ್ನು ಪಟೇಲರ ಮುಂದಿಟ್ಟ.

ಗುಂಡ ಮದುವೆಯಾಗಿದ್ದರೂ ಆತನ ಹೆಂಡತಿ ಮತ್ತು ಅವನೊಂದಿಗೆ ಮಾತುಕತೆ ಅಷ್ಟಕ್ಕಷ್ಟೇ ಇತ್ತು. ಇದನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದ ಆತನ ಗೆಳಯನಿಗೆ ಯಾಕೆ ಹೀಗೆ ಎಂದು ಅರ್ಥವಾಗಿರಲಿಲ್ಲ. ಕೊನೆಗೆ ಕುತೂಹಲ ತಡೆಯಲಾರದೇ ಕೇಳಯೇ ಬಿಟ್ಟ. ಯೋಕೋ ನೀನು ಹೆಂಡತಿ ಬಳಿ ಮಾತನಾಡುವುದಿಲ್ಲ ಅಂತ. ಮದುವೆಯಾದ ಹೆಂಗಸರಲ್ಲಿ ಜಾಸ್ತಿ ಸಲಿಗೆ ಇಟ್ಟುಕೊಳ್ಳಬಾರದು ಅಂತ ಅದು ಅಪಾಯ ಅಂತ ನನಗೆ ಗೆಳೆಯರು ಸಲಹೆ ನೀಡಿದ್ದಾರೆ ಎಂದು ಕಾರಣ ತಿಳಿಸಿದ.

Share this Story:

Follow Webdunia kannada