ಕುಖ್ಯಾತ ಕಳ್ಳನೊಬ್ಬನು ಹೇಗೋ ಜೈಲಿನಿಂದ ತಪ್ಪಿಸಿಕೊಂಡು ಬಿಟ್ಟಿದ್ದ. ಇದರಿಂದ ಕುಪಿತಗೊಂಡ ಇನ್‌ಸ್ಪೆಕ್ಟರ್ ಪೊಲೀಸ್ ಪೇದೆಯ ಮೇಲೆ ಆಕ್ರೋಶಗೊಂಡಿದ್ದರು.
ಇನ್‌ಸ್ಪೆಕ್ಟರ್ ಸಮಜಾಯಿಶುವ ಸಲುವಾಗಿ ಪೇದೆಯು ತಪ್ಪಿಸಿಕೊಂಡು ಓಡುತ್ತಿದ್ದ ಕಳ್ಳನನ್ನು ಹಿಡಿಯಲಾಗಲಿಲ್ಲ ಅದರೆ ಅವನ ಬೆರಳಚ್ಚು ನಾನು ನೀಡಬಲ್ಲೆ ಎಂದು ಆತ್ಮವಿಶ್ವಾಸದಿಂದ ನುಡಿದ. ಇನ್‌ಸ್ಪೆಕ್ಟರ್ ಬಹಳ ಸಂತೋಷದಿಂದ ಹೌದಾ ಎಲ್ಲಿ ಎಂದು ಕೇಳಿದಾಗ, ನನ್ನ ಕೆನ್ನೆಯ ಮೇಲೆ ಎಂದು ತನ್ನ ಕೆನ್ನೆಯನ್ನು ತೋರಿಸಿದ.