ಒಬ್ಬನ ಮನೆಗೆ ಬೆಂಕಿ ಹತ್ತಿದಾಗ, ತನ್ನ ಮಗನೊಂದಿಗೆ ಹೊರಗೆ ಓಡಿ ಬಂದು ಹೊರಗೆ ಬೆಂಕಿಯಿಂದ ದೂರವಿರಲು ಹೇಳಿ ಮತ್ತೆ ಒಳಗಡೆ ಹೋಗಿ ಮಗಳನ್ನು ಕಾಪಾಡಿದನು. ನಂತರ ಹೆಂಡತಿಯನ್ನು ಹೊರಗೆ ತಂದನು. ನಂತರ ನಾಯಿಯನ್ನು ಕೂಡ ಹೊರಗೆ ಹಾಕಿದನು. ನಂತರ ಮತ್ತೆ ಎರಡು ಬಾರಿ ಒಳಗಡೆ ಹೋಗಿ ಯಾರನ್ನು ತರದೆ ಸುಮ್ಮನೆ ಹಿಂತಿರುಗಿದನು. ಇದನ್ನು ನೋಡಿದ ಒಬ್ಬನು, "ಯಾಕೆ ನೀನು ಸುಮ್ಮನೆ ಹೋಗಿ ಬರುತ್ತಿದ್ದಿಯಾ" ಎಂದು ಕೇಳಿದಾಗ, "ನನ್ನ ಅತ್ತೆಯನ್ನು ನಾನು ಮಗುಚಿ ಹಾಕುತ್ತಿದ್ದೇನೆ" ಎಂದನು.