ಇಂಡಿಯಾ, ಅಮೇರಿಕಾ ಮತ್ತು ಜಪಾನ್‌ನ ಮೂವರು ಬೀಚ್‌ನಲ್ಲಿ ಮಾತಾಡುತ್ತಾ ಹೋಗುತ್ತಿದ್ದರು...
ಜಪಾನಿನವ ನಾವು ಇಲೆಕ್ಟ್ಕಿಕ್ ವಸ್ತುಗಳನ್ನು ತಯಾರಿ ಮಾಡುವುದರಲ್ಲಿ ತುಂಬಾ ಬುದ್ಧಿವಂತರು ಎಂದು ಹೇಳಿ ತನ್ನ ಕೈಯಲ್ಲಿದ್ದ ಜಪಾನಿನ ವಾಚನ್ನು ತೆಗೆದು ಸಮುದ್ರಕ್ಕೆ ಎಸೆದು ಬಿಟ್ಟ.
ಆಗ ಅಮೇರಿಕಾದವ ನಾವು ಶ್ರೀಮಂತರು ನಮ್ಮಲ್ಲಿ ಬೇಕಾದಷ್ಟು ದುಡ್ಡಿದೆ ಎಂದು ಅವನಲ್ಲಿದ್ದ ಅಮೇರಿಕಾ ಡಾಲರನ್ನು ತೆಗೆದು ಸಮುದ್ರಕ್ಕೆ ಎಸೆದ.
ಆಗ ಇಂಡಿಯಾದವ ನಮ್ಮಲ್ಲಿ ದುಡ್ಡೇನಿಲ್ಲ ನಮ್ಮಲ್ಲಿ ಜನಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿ ಅವರಿಬ್ಬರನ್ನು ಸಮುದ್ರಕ್ಕೆ ದೂಡಿ ಹಾಕಿದ...