ಸಂತಾ ಮನೆಯಿಂದ ಆಫೀಸ್‌ಗೆ ಹೊರಟ. ದಾರಿಯಲ್ಲಿ ತನ್ನ ಸಿಗಾರ್ ಹೊರತೆಗೆದು ಹಚ್ಚಲು ಹಲವು ಬಾರಿ ಪ್ರಯತ್ನಿಸಿದ. ಆದರೆ ಎದುರು ಗಾಳಿಯಿಂದ ಅದು ಸಾಧ್ಯವಾಗಲಿಲ್ಲ. ಆಗ ಸಂತಾ ತಲೆ ಓಡಿಸಿದ. ಹಿಂದಕ್ಕೆ ತಿರುಗಿ ಸಿಗಾರ್‌ಗೆ ಬೆಂಕಿ ತಗುಲಿಸಲು ಅದು ಹೊಗೆ ಕಾರತೊಡಗಿತು. ತನ್ನ ಬುದ್ಧಿಗೆ ತಾನೇ ಭೇಷ್ ಅಂದುಕೊಂಡು ಮುನ್ನೆಡೆದ. ಆದರೆ ಅವನು ಕೊನೆಗೆ ತಲುಪಿದ್ದು ಆಫೀಸ್‌ನಲ್ಲ, ಬದಲು ತನ್ನ ಮನೆಯನ್ನು!