ಗುಂಡ ಕಾರು ಚಲಾಯಿಸುತ್ತಿದ್ದ. ದಾರಿಯ ಮಧ್ಯೆ ಪೊಲೀಸ್ ಅಧಿಕಾರಿಯೊಬ್ಬ ಕಾರನ್ನು ತಡೆದು ನಿಲ್ಲಿಸಿದ. ಗುಂಡ ಕಿಟಕಿಯಿಂದ ತಲೆಯನ್ನು ಹೊರ ಹಾಕಿ "ಏನಾದರೂ ತೊಂದರೆಯೇ ಸರ್?" ಆಗ ಪೊಲೀಸ್ ಅಧಿಕಾರಿಯು "ಏನೂ ತೊಂದರೆಯಿಲ್ಲ, ನೀವು ಸುರಕ್ಷಿತವಾಗಿ ವಾಹನ ಚಾಲನೆ ಮಾಡುತ್ತಿದ್ದುದನ್ನು ನೋಡಿದೆ, ಅದಕ್ಕಾಗಿ ನಿಮಗೆ ಸುರಕ್ಷಿತ ಚಾಲನೆಯ ಬಹುಮಾನ ನೀಡುತ್ತಿದ್ದೇನೆ. ಅಂದ ಹಾಗೆ ಬಹುಮಾನ ಹಣದೊಂದಿಗೆ ನೀವೇನು ಮಾಡುತ್ತೀರಿ", ಒಂದು ಕ್ಷಣ ಯೋಚಿಸಿದ ಗುಂಡ ಹೇಳಿದ "ನಾನು ಮೊದಲು ಡ್ರೈವಿಂಗ್ ಲೈಸೆನ್ಸ್ ತೆಗೆದುಕೊಳ್ಳುತ್ತೇನೆ". ಗುಂಡನ ಪಕ್ಕದಲ್ಲಿ ಕುಳಿತಿದ್ದ ಹೆಂಗಸು ಪೋಲೀಸ್ ಅಧಿಕಾರಿಗೆ ಹೇಳಿದಳು " ಅವನ ಮಾತಿಗೆ ಕಿವಿಗೊಡಬೇಡಿ ಸರ್, ಅವನು ಕುಡಿದಿದ್ದಾಗ ಹೀಗೇ ಏನೇನೋ ಮಾತನಾಡುತ್ತಾನೆ". ಹಿಂದಿನ ಸೀಟಿನಲ್ಲಿ ಕೂತಿದ್ದ ಮತ್ತೊಬ್ಬ ಗಂಡಸು ಹೇಳಿದ "ಕದ್ದ ಕಾರಿನಲ್ಲಿ ನಾವು ಬಹುದೂರ ಹೋಗಲಾಗುವುದಿಲ್ಲ ಎಂದು ನಾನು ಆಗಲೇ ಹೇಳಿದ್ದೆ"!! ಪೋಲೀಸ್ ಅಧಿಕಾರಿ ಅಲ್ಲಿಯೇ ಮೂರ್ಛೆ ಹೋದ.