"ಯಾವಾಗಲೂ ಫೋನ್ ಬಿಲ್ ಅತಿಯಾಗಿ ಬರುತ್ತಿತ್ತು. ಇದರಿಂದ ತಲೆಬಿಸಿಗೊಂಡ ಮನೆಯ ಯಜಮಾನ ಕುಟುಂಬದ ಸದಸ್ಯರನ್ನು ಮೀಟಿಂಗ್ ಕರೆದನು.
ತಂದೆ: ಫೋನ್ ಬಿಲ್ ಜಾಸ್ತಿ ಬರುತ್ತಿದೆ. ನಾವು ಮಿತಿಯಲ್ಲಿ ಬಳಸಬೇಕು. ನಾನು ಯಾವಾಗಲೂ ಆಫೀಸ್ ಫೋನ್ ಅನ್ನೇ ಬಳಸುವುದು.
ತಾಯಿ: ನಾನೂ ಹಾಗೆ ಕೆಲಸದ ಫೋನ್ ಅನ್ನೇ ಹೆಚ್ಚಾಗಿ ಬಳಸುವುದು. ಮನೆ ಫೋನ್ ಬಳಸುವುದೇ ಕಡಿಮೆ.
ಮಗ: ನಾನೂ ಸಹ ಮನೆ ಫೋನ್ ಬಳಸುವುದೇ ಇಲ್ಲ. ಯಾವಾಗಲೂ ಕಂಪೆನಿ ಮೊಬೈಲ್ ಅನ್ನೇ ಬಳಸುವುದು.
ಮನೆ ಕೆಲಸದಾಕೆ: ಮತ್ತೆ ಏನು ತೊಂದರೆ? ನಾವೆಲ್ಲರೂ ನಮ್ಮ ಕೆಲಸದ ಫೋನ್‌ಗಳನ್ನೇ ಬಳಸುತ್ತಿದ್ದೇವೆ."