"ಕಡಲಿನಾಚೆ ಕಾರ್ಯನಿರ್ವಹಿಸುತ್ತಿರುವ ಒಬ್ಬ ಸೈನಿಕನು ತನ್ನ ಹುಡುಗಿಯಿಂದ ಪತ್ರ ಸ್ವೀಕರಿಸಿದ ತಕ್ಷಣವೇ ಕಳವಳಗೊಂಡಿದ್ದನು. ಅದರಲ್ಲಿ ತಮ್ಮಿಬ್ಬರ ಸಂಬಂಧ ಕಡಿದುಕೊಳ್ಳುವ ಬಗ್ಗೆ ಮತ್ತು ಅವಳ ಫೋಟೊವನ್ನು ಹಿಂತಿರುಗಿಸುವಂತೆ ತಿಳಿಸಲಾಗಿತ್ತು. ಅವನು ಕ್ರಿಯಾತ್ಮಕ ವ್ಯಕ್ತಿ, ಅವನು ತನ್ನ ಎಲ್ಲಾ ಗೆಳೆಯರಿಂದ ಬೇಡವಾದ ಎಲ್ಲಾ ಹುಡುಗಿಯರ ಫೋಟೊಗಳನ್ನು ಸಂಗ್ರಹ ಮಾಡಿ, ಅವಳಿಗೆ ಕಳುಹಿಸಿದ, ಮತ್ತು ಅದರ ಜೊತೆ ಒಂದು ಪತ್ರವನ್ನು ನೀಡಿದ. ಅದರಲ್ಲಿ ಹೀಗೆ ಬರೆದಿತ್ತು:
""ಡಿಯರ್ ಮೇರಿ,
ನನಗೆ ನಿನ್ನ ಫೋಟೊ ಯಾವುದೆಂದು ನೆನಪಿಗೆ ಬರುತ್ತಿಲ್ಲ..ದಯವಿಟ್ಟು ನಿನ್ನ ಫೋಟೊ ಮಾತ್ರ ಇಟ್ಟುಕೊಂಡು ಉಳಿದವುಗಳನ್ನು ನನಗೆ ಕಳುಹಿಸು!""
ಜಾನ್."