"ಟೀಚರ್: ಜಾನಿ, ವಾಟ್ ಈಸ್ ಯುವರ್ ಫಾದರ್ ನೇಮ್?
ಜಾನಿ: ಅವರ ಹೆಸರು ಮಖಾನ್ ಲಾಲ್.
ಟೀಚರ್ (ಸಿಟ್ಟುಗೊಂಡು): ನಾನು ಎಷ್ಟು ಬಾರಿ ಹೇಳಿದ್ದೇನೆ. ಇಂಗ್ಲೀಷ್‌ನಲ್ಲಿ ಹೇಳು.
ಜಾನಿ: ಬಟ್ಟರ್ ರೆಡ್.
ಟೀಚರ್: ನೀನು ಕ್ಯಾಟ್‌ನ ಸ್ಪೆಲ್ಲಿಂಗ್ ಅನ್ನು ಹೇಗೆ ಹೇಳುತ್ತೀ?
ಜಾನಿ: K A T
ಟೀಚರ್: ಆದರೆ ಡಿಕ್ಶನರಿಯಲ್ಲಿ ಕ್ಯಾಟ್‌ನ ಸ್ಪೆಲ್ಲಿಂಗ್ CAT ಅಂತ ಇದೆ.
ಜಾನಿ: ನೀವು ನನ್ನಲ್ಲಿ ನೀನು ಹೇಗೆ ಹೇಳುತ್ತೀ ಎಂದು ಕೇಳಿದ್ದು."