ಒಬ್ಬ ಪೋಲೀಸ್ ಪೇದೆ, ಒಂದು ಕೈಯಲ್ಲಿ ಅಳಿಲು ಇನ್ನೊಂದು ಕೈಯಲ್ಲಿ ಚಾಕು ಹಿಡಿದುಕೊಂಡ ತುಂಟ ಹುಡುಗನನ್ನು ಹಿಡಿದ. ಆ ಹುಡುಗ ಆ ಅಳಿಲನ್ನು ಕೊಲ್ಲುತ್ತಾನೇನೋ ಎಂಬ ಹೆದರಿಕೆಯಿಂದ ಪೋಲೀಸ್ ಪೇದೆ 'ನೋಡು ಇಲ್ಲಿ ಕೇಳು. ನೀನು ಆ ಅಳಿಲಿಗೆ ಏನೆಲ್ಲ ಮಾಡುತ್ತಿಯೊ ಅದನ್ನು ನಾನು ನಿನಗೆ ಮಾಡುತ್ತೇನೆ' ಎಂದು ಆ ಹುಡುಗನಿಗೆ ಹೇಳಿದನು. ತಕ್ಷಣ ಪುಟ್ಟ ಹುಡುಗ 'ಹಾಗಾದರೆ ನಾನು ಇದರ ಕಾಲಿಗೆ ಮುತ್ತುಕೊಟ್ಟು ಬಿಟ್ಟುಬಿಡುತ್ತೇನೆ' ಎಂದನು.