ಒಬ್ಬ ಕಳ್ಳ ಎಲ್ಲಿಂದಲೋ ಸಾಮಾನು ಕದ್ದು ಓಡಿ ಬರುತ್ತಿದ್ದ. ಮಾರ್ಗದಲ್ಲಿ ಪೊಲೀಸ್, ಯಾರು ನೀನು ಎಂದು ಪ್ರಶ್ನಿಸಿದ. ಮೊದಲು ಹೆದರಿದ ಆತ, ನಂತರ ನಾನು ಕಳ್ಳ ಎಂದು ಹೇಳಿ ಓಡಿ ಹೋದ. ಓಡಿ ಹೋಗುತ್ತಿದ್ದ ಕಳ್ಳನಿಗೆ ಪೊಲೀಸ್, ಎಲ್ಲೋ ಹುಚ್ಚ ಇರಬೇಕು, ಪೊಲೀಸರೂಂತ ತಿಳಿಯದೆ ತಮಾಷೆ ಮಾಡುತ್ತಾನೆ ಎಂದು ಬೀಡಿ ಹಚ್ಚಿದ.