ಪುಟ್ಟು ಹುಡುಗಿ ಪಿಟೀಲು ಅಭ್ಯಾಸ ಮಾಡುತ್ತಿದ್ದಳು. ಅವಳ ತಂದೆ ಅಂದಿನ ದಿನಪತ್ರಿಕೆ ಓದುತ್ತಿದ್ದರು. ಸುಮ್ಮನೆ ಮಲಗಿದ್ದ ಮನೆಯ ನಾಯಿ, ಹುಡುಗಿಯ ಪಿಟೀಲು ಶಬ್ಧವನ್ನು ಕೇಳಿ ಬೊಬ್ಬಿಡಲು ಪ್ರಾರಂಭಿಸಿತು. ಒಂದು ಕಡೆ ನಾಯಿಯ ಬೊಗಳುವಿಕೆ, ಇನ್ನೊಂದು ಕಡೆ ಪಿಟೀಲು ವಾದನ ಈ ಎರಡೂ ಶಬ್ಧಗಳನ್ನೂ ತಾಳಲಾರದೆ, ತಂದೆ ಪತ್ರಿಕೆಯನ್ನು ಬಿಸಾಡಿ 'ಅಯ್ಯೋ ಬೇಡಿಕೊಳ್ಳುತ್ತಿದ್ದೇನೆ, ನಾಯಿಗೆ ಗೊತ್ತಿಲ್ಲದೇ ಇರುವುದನ್ನು ನಿನಗೆ ವಾದಿಸಲಿಕ್ಕೆ ಆಗುವುದಿಲ್ಲವೇ?' ಎಂದು ಜೋರಾಗಿ ಹೇಳಿದರು.