ಸಂತಾ ಮತ್ತು ಬಂತಾ ಪಿಕ್ನಿಕ್‌ಗೆ ಹೋಗಲು ನಿರ್ಧರಿಸುತ್ತಾರೆ. ಆದರೆ ಸ್ಥಳಕ್ಕೆ ಹೋದಾಗ ಅವರಿಗೆ ವಿಸ್ಕಿ ಬಿಟ್ಟು ಬಂದಿರುವುದು ಜ್ಞಾಪಕವಾಗುತ್ತದೆ. ಆಗ ಬಂತಾ "ನಾನು ಹೋಗಿ ವಿಸ್ಕಿಯನ್ನು ತರುತ್ತೇನೆ. ಆದರೆ ನೀನು ನಾನು ಹಿಂದಿರುಗಿ ಬರುವವರೆಗೆ ಈ ಚಿಕನ್ ತಿನ್ನಬಾರದು." ಎಂದು ತಾಕೀತು ಮಾಡುತ್ತಾನೆ. ಅದಕ್ಕೆ ಸಂತಾ ಒಪ್ಪಿಗೆ ಸೂಚಿಸುತ್ತಾನೆ. ದಿನವಿಡಿ ಕಾದು ಕಾದು, ತಂಬಾ ಹಸಿದು, ಬಂತಾ ಬರದಿದ್ದನ್ನು ನೋಡಿ, ತಾಳಲಾರದೆ ಇನ್ನೇನು ಚಿಕನ್‌ಗೆ ಬಾಯಿಹಾಕಬೇಕು ಎನ್ನುವಷ್ಟರಲ್ಲಿ ತಾನು ಅಡಗಿಕೊಂಡ ಪಕ್ಕದ ಮರದಿಂದ ಹೊರಗೆ ಬಂದು ಬಂತಾ "ನೀನು ಅದನ್ನು ತಿಂದರೆ, ನಾನು ಹೋಗುವುದಿಲ್ಲ" ಎನ್ನಬೇಕೆ?