ಸಂತಾ ಮತ್ತು ಬಂತಾ ಮೆಂಟಲ್ ಆಸ್ಪತ್ರೆಗೆ ಸೇರಿದ್ದರು. ಒಂದು ದಿನ ಸಂತಾ ಈಜುಕೊಳಕ್ಕೆ ಬಿದ್ದು ಬಿಟ್ಟ. ಇದನ್ನು ನೋಡಿದ ಬಂತಾ ತಕ್ಷಣ ನೀರಿಗೆ ಹಾರಿ ಸಂತಾನನ್ನು ಬದುಕಿಸಿದ.
ಡಾಕ್ಟರ್: ನಿನಗೆ ಒಂದು ಒಳ್ಳೆಯ ಸುದ್ದಿ ಹಾಗೂ ಕೆಟ್ಟ ಸುದ್ದಿ ಇದೆ. ಒಳ್ಳೆ ಸುದ್ದಿ ಏನಂದರೆ ನಿನ್ನನ್ನು ಅಸ್ಪತ್ರೆಯಿಂದ ಬಿಡುಗಡೆ ಮಾಡುತ್ತೇವೆ. ನಿನಗೆ ನೀರಿಗೆ ಹಾರಲು ಮತ್ತು ಒಬ್ಬನ ಜೀವ ಉಳಿಸುವಷ್ಟು ಬುದ್ಧಿ ಬಂದಿದೆ. ಕೆಟ್ಟ ಸುದ್ದಿ ಏನೆಂದರೆ ನೀನು ಬದುಕಿಸಿದ ವ್ಯಕ್ತಿ ಬಾತ್ ರೂಂನಲ್ಲಿ ನೇಣು ಹಾಕಿಕೊಂಡಿದ್ದಾನೆ.
ಬಂತಾ: ಅವನನ್ನು ಮೇಲೆ ತೂಗಿ ಹಾಕಿದ್ದು ನಾನೇ.. ನೀರಿಗೆ ಬಿದ್ದಿದ್ದ ಅಲ್ವಾ.. ಅದಕ್ಕೆ ಒಣಗಲಿ ಅಂತಾ..!