Article Jokes In Kannada %e0%b2%a8%e0%b2%be%e0%b2%af%e0%b2%bf%e0%b2%ae%e0%b2%b0%e0%b2%bf 110090400076_1.htm

Select Your Language

Notifications

webdunia
webdunia
webdunia
webdunia

ನಾಯಿಮರಿ

ಕನ್ನಡ ಜೋಕ್
ಶಾಲಾ ವರ್ಷದ ಕೊನೆಯ ದಿನದಂದು ಟೀಚರ್ ತಮ್ಮ ವಿದ್ಯಾರ್ಥಿಗಳಿಂದ ಉಡುಗೊರೆಗಳನ್ನು ಸ್ವೀಕರಿಸುತ್ತಿದ್ದರು. ಹೂಮಾರುವವರ ಮಗ ತಂದುಕೊಟ್ಟ ಉಡುಗೊರೆಯನ್ನು ನೋಡಿದ ಟೀಚರ್‌ 'ಇದರಲ್ಲಿರುವುದು ತುಂಬಾ ಚಂದದ ಹೂಗಳು ಎಂದು ನನಗೆ ಗೊತ್ತಿದೆ' ಎಂದು ಖುಷಿಯಿಂದ ಹೇಳಿಕೊಂಡರು. ಆಶ್ಚರ್ಯಗೊಂಡ ವಿದ್ಯಾರ್ಥಿ 'ಸರಿಯಾಗಿ ಹೇಳಿದಿರಿ. ನಿಮಗೆ ಹೇಗೆ ಗೊತ್ತಾಯಿತು?' ಎಂದು ಕೇಳಿದನು. ಅದಕ್ಕೆ ಟೀಚರ್ 'ಓಹ್, ಹೀಗೆ ಸುಮ್ಮನೆ ಊಹಿಸಿದೆ' ಎಂದರು. ನಂತರ ಬಂದ ವಿದ್ಯಾರ್ಥಿ ಸಿಹಿ ಅಂಗಡಿಯಿರುವವರ ಮಗ. ಅವನು ತಂದ ಉಡುಗೊರೆಯನ್ನು ಊಹಿಸಿ ಸರಿಯಾಗಿ ಹೇಳಿದರು ಟೀಚರ್. ಕೊನೆಗೆ ಬಂದ ವಿದ್ಯಾರ್ಥಿ ವೈನ್ ಶಾಪ್ ಇರುವವರ ಮಗ. ಅವನು ತಂದ ಉಡುಗೊರೆಯು ತೊಟ್ಟಿಕ್ಕುತ್ತಿತ್ತು. ಅದನ್ನು ಕೈಯಿಂದ ಮುಟ್ಟಿ ನೆಕ್ಕಿ ರುಚಿ ನೋಡಿದ ಟೀಚರ್ 'ಇದು ಖಂಡಿತ ವೈನ್ ಇರಬೇಕು' ಎಂದರು. ಆದರೆ ಅದಲ್ಲ ಎಂದು ವಿದ್ಯಾರ್ಥಿ ಹೇಳಿದುದಕ್ಕೆ ಟೀಚರ್ ಮತ್ತೊಮ್ಮೆ ಸರಿಯಾಗಿ ನೆಕ್ಕಿ ನೋಡಿ ಬಿಯರ್ ಇರಬೇಕು ಎಂದರು. ಅದೂ ತಪ್ಪಾದಾಗ ಕೊನೆಗೆ ನೀನೇ ಹೇಳು ಎಂದುದಕ್ಕೆ ಆ ಪುಟ್ಟ ಬಾಲಕ 'ಅದರಲ್ಲಿರುವುದು ನಾಯಿಮರಿ' ಎಂದನು.

Share this Story:

Follow Webdunia kannada