"ಲೆಕ್ಕ ಪಾಠ ಮಾಡುತ್ತಿದ್ದ ಟೀಚರ್ ಒಮ್ಮೆ ಗುಂಡನಲ್ಲಿ ಪ್ರಶ್ನೆಯೊಂದನ್ನು ಕೇಳಿದರು.
ಶಿಕ್ಷಕಿ--ಗುಂಡಾ, ನಿಮ್ಮ ಮನೆಗೆ ನಾನು ಈವತ್ತು ಎರಡು ನಾಯಿ ಮರಿಗಳನ್ನು ಕೊಡುತ್ತೇನೆ, ನಾಳೆನೂ ಎರಡು ನಾಯಿ ಮರಿಗಳನ್ನು ಕೊಡುತ್ತೇನೆ, ಹಾಗಾದರೆ ಈಗ ನಿಮ್ಮ ಮನೆಯಲ್ಲಿ ಒಟ್ಟು ಎಷ್ಟು ನಾಯಿ ಮರಿಗಳಿದ್ದಂತಾಯಿತು?
ಗುಂಡ-- ಒಟ್ಟು ಐದು ನಾಯಿ ಮರಿ ಆಯಿತು ಮೆಡಂ.
ಶಿಕ್ಷಕಿ-- ಅದು ಹೇಗೆ?
ಗುಂಡ-- ನೀವು ಎರಡು ದಿನ ಎರಡರಂತೆ ಕೊಟ್ಟರೆ ಒಟ್ಟು ನಾಲ್ಕು ಮತ್ತು ನಮ್ಮ ಮನೆಯಲ್ಲಿ ಈದೀಗಲೇ ಒಂದು ನಾಯಿ ಮರಿ ಇದೆ ಟೀಚರ್ ಎಂದ."