ಐಬಿ, ಸಿಬಿಐ ಮತ್ತು ಪೋಲೀಸರು ತಾವೇ ಅಪರಾಧಿಗಳನ್ನು ನಿರ್ವಹಿಸುವಲ್ಲಿ ಪಳಗಿದ್ದೇವೆ ಎಂದು ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದರು. ಪ್ರಧಾನ ಮಂತ್ರಿಗಳು ಅವರಿಗೆ ಸ್ಪರ್ಧೆಯೊಂದನ್ನು ಇಡಲು ಯೋಚಿಸಿದರು. ಅವರು ಮೊಲವೊಂದನ್ನು ಕಾಡಿನೊಳಗೆ ಬಿಟ್ಟರು ಮತ್ತು ಎಲ್ಲರೂ ಅದನ್ನು ಹಿಡಿಯಬೇಕಾಗಿತ್ತು. ಮೊದಲು ಐಬಿಯವರು ಕಾಡಿಗೆ ಹೋದರು, ಅವರು ಅರಣ್ಯದಲ್ಲೆಲ್ಲಾ ವನಪಾಲಕರನ್ನು ನೇಮಿಸಿದರು, ಕಾಡಿನಲ್ಲಿದ್ದ ಪ್ರತಿಯೊಬ್ಬರನ್ನೂ ಅವರು ಪ್ರಶ್ನಿಸಿದರು. ಮೂರು ತಿಂಗಳ ಸತತ ತನಿಖೆಯ ನಂತರ, ಕಾಡಿನಲ್ಲಿ ಮೊಲವು ಇಲ್ಲ ಎಂದು ಅವರು ವರದಿ ನೀಡಿದರು. ನಂತರ ಸಿಬಿಐನವರು ಕಾಡಿಗೆ ಹೋದರು. ಎರಡು ವಾರಗಳ ಕಾಲ ಹುಡುಕಿದ ನಂತರ ಯಾವುದೇ ಸುಳಿವು ಸಿಗದಾದಾಗ ಅವರು ಇಡೀ ಕಾಡಿಗೆ ಬೆಂಕಿ ಇಟ್ಟು ಮೊಲವನ್ನೂ ಒಳಗೊಂಡು ಕಾಡಿನಲ್ಲಿದ್ದ ಪ್ರತಿ ಪ್ರಾಣಿಯನ್ನೂ ಕೊಂದರು ಮತ್ತು ಯಾವುದೇ ವರದಿ ನೀಡದೇ ಕೇಸ್ ಅನ್ನು ಮುಕ್ತಾಯಗೊಳಿಸಿದರು. ನಂತರ ಪೋಲೀಸರು ಕಾಡಿಗೆ ಹೋದರು, ಎರಡು ಗಂಟೆಗಳನ್ನೇ ಅವರು ಚೆನ್ನಾಗಿ ಹೊಡೆದು ಕರಡಿಯೊಂದನ್ನು ಕರೆದುಕೊಂಡು ಬಂದರು, ಅದು ಕೂಗುತ್ತಿತ್ತು "ನನ್ನನ್ನು ಕ್ಷಮಿಸಿಬಿಡಿ, ಹೌದು, ನಾನೇ ಮೊಲ, ಹೌದು ನಾನೇ ಮೊಲ"!!