ನೀನು ಪ್ರತಿ ದಿನ 8 ಕಿಲೋ ಮೀಟರ್‌ನಂತೆ 30 ದಿನ ಓಡಿದರೆ, ನಿನ್ನ ತೂಕ 34 ಕೆಜಿಯಷ್ಟು ಇಳಿಯಬಹುದು ಎಂದು ಡಾಕ್ಟರ್ ಸಂತಾನಿಗೆ ಸಲಹೆ ನೀಡಿದ್ದರು.
ಕೆಲವು ದಿನಗಳ ನಂತರ ಸಂತಾ ಡಾಕ್ಟರ್‌ಗೆ ಫೋನ್ ಮಾಡಿ 'ನನ್ನ ತೂಕವೆನೋ ಕಡಿಮೆಯಾಗಿದೆ, ಆದರೆ ಒಂದು ಸಮಸ್ಯೆ ಡಾಕ್ಟ್ರೇ...'
ಅದೇನೆಂದು ಡಾಕ್ಟರ್ ಕೇಳಿದರು. ಸಂತಾ ಬೇಸರದಿಂದ ಉತ್ತರಿಸಿದ- 'ನಾನೀಗ ಮನೆಯಿಂದ 2400 ಕಿಲೋ ಮೀಟರ್ ದೂರದಲ್ಲಿದ್ದೇನೆ'..!