ಮೂರು ವರ್ಷ ಪ್ರಾಯದ ಬಿಲ್ಲಿ ಕೋಣೆಯಲ್ಲಿ ಗಟ್ಟಿಯಾಗಿ ಅಳುವ ಧ್ವನಿ ಕೇಳಿಬಂತು. ತಂದೆ, ತಾಯಿ ಧಾವಿಸಿ ನೋಡಿದಾಗ ರಚ್ಚೆ ಹಿಡಿದು ಬಿಲ್ಲಿ ಅಳುತ್ತಾ, ತಾನು ನಾಣ್ಯನುಂಗಿದ್ದು, ಸತ್ತೇ ಹೋಗುವುದಾಗಿ ಕೂಗುತ್ತಿದ್ದ.
ಅವನು ಕಿರುಚುವುದನ್ನು ನಿಲ್ಲಿಸಲು ತಂದೆಗೆ ಸಾಧ್ಯವಾಗಲಿಲ್ಲ. ಅವನನ್ನು ಸಂತೈಸಲು ತಮ್ಮ ಜೇಬಿನಿಂದ ನಾಣ್ಯವೊಂದನ್ನು ತೆಗೆದು ಬಿಲ್ಲಿ ಕಿವಿಯಿಂದ ಹೊರತೆಗೆಯುವಂತೆ ನಟಿಸಿ, ಇಲ್ಲಿ ಬಂತು ನೋಡು ನೀನು ನುಂಗಿದ ನಾಣ್ಯವೆಂದು ಕೂಗಿದರು.
ಬಿಲ್ಲಿಗೆ ಖುಷಿಯಾಗಿ ತಂದೆಯ ಕೈಯಿಂದ ನಾಣ್ಯವನ್ನು ಕಸಿದುಕೊಂಡು ಮತ್ತೆ ನುಂಗಿ 'ಮತ್ತೆ ಕಿವಿಯಿಂದ ತೆಗಿ ಡ್ಯಾಡಿ' ಎಂದು ಹೇಳಿದ ಭೂಪ.