ಸಂತಾನನ್ನು ಹುಡುಕಿಕೊಂಡು ಆತನ ಹೆಂಡತಿ ಬಾರ್ ತನಕವೂ ಬಂದಿದ್ದಳು. ಆಕೆಯನ್ನು ಪ್ರೀತಿಯಿಂದಲೇ ಕುರ್ಚಿಯಲ್ಲಿ ಕುಳ್ಳಿರಿಸಿದ ಸಂತಾ, ಗ್ಲಾಸ್‌ಗೆ ಸುರಿದು 'ಕುಡಿ' ಎಂದು ಕೊಟ್ಟ. ಏನೋ ಸೋಡಾ ಇರಬೇಕೆಂದು ಕುಡಿದ ಆಕೆ, 'ಅಬ್ಬ.. ಏನು ವಾಸನೆ.. ಇದನ್ನು ನೀವು ದಿನಾ ಹೇಗೆ ಕುಡೀತೀರಿ?'. ಆನಂದತುಂದಿಲನಾದ ಸಂತಾ ಹೇಳಿದ, 'ಈಗ್ಲಾದ್ರೂ ಗೊತ್ತಾಯ್ತಲ್ಲ ನನ್ನ ಪಾಡು ಏನೆಂದು'..!