Select Your Language

Notifications

webdunia
webdunia
webdunia
webdunia

ನನಗೂ ಗೊತ್ತಿಲ್ಲ

ಕನ್ನಡ ಜೋಕ್
ಬಂತಾ ಮತ್ತು ಅಮೆರಿಕನ್ ಪ್ರಜೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಮಾತಿಗೆ ಮಾತು ಬೆಳೆದು ಪಂಥ ಕಟ್ಟುವ ಸ್ಥಿತಿ ನಿರ್ಮಾಣವಾಗಿತ್ತು.

ಅಮೆರಿಕನ್: ನಾನು ನಿನಗೊಂದು ಪ್ರಶ್ನೆ ಕೇಳುತ್ತೇನೆ. ಉತ್ತರ ಹೇಳದಿದ್ದರೆ ನೀನು ನನಗೆ ಐದು ಡಾಲರ್ ಕೊಡಬೇಕು. ಅದೇ ರೀತಿ ನೀನು ನನಗೊಂದು ಪ್ರಶ್ನೆ ಕೇಳು. ಉತ್ತರಿಸದಿದ್ದರೆ ನಾನು 500 ಡಾಲರ್ ಕೊಡುತ್ತೇನೆ.

ಬಂತಾ: ಸರಿ, ನಾನು ಸಿದ್ಧ.

ಅಮೆರಿಕನ್: ಅಮೆರಿಕ ಮತ್ತು ಭಾರತ ನಡುವಿನ ದೂರ ಎಷ್ಟು?

ಬಂತಾ: ಗೊತ್ತಿಲ್ಲ.

(ಬಂತಾ ಐದು ಡಾಲರ್‌ಗಳನ್ನು ಅಮೆರಿಕನ್‌ಗೆ ನೀಡಿದ)

ಬಂತಾ: ಬೆಟ್ಟ ಏರುವಾಗ ಮೂರು ಕಾಲುಗಳು, ಇಳಿಯುವಾಗ ನಾಲ್ಕು ಕಾಲುಗಳು ಯಾವುದು ಆ ಪ್ರಾಣಿ?

ಅಮೆರಿಕನ್: ಗೊತ್ತಿಲ್ಲ.

(ಉತ್ತರಿಸಲು ವಿಫಲನಾದ ಅಮೆರಿಕನ್ 500 ಡಾಲರ್ ಬಂತಾನಿಗೆ ನೀಡಿ, ಉತ್ತರ ಏನೆಂದು ಕೇಳಿದ)

ಬಂತಾ: ನನಗೂ ಗೊತ್ತಿಲ್ಲ..!

Share this Story:

Follow Webdunia kannada