ಸಂತಾನಿಗೆ ತುಂಬಾ ದಿನಗಳಿಂದ ಹಲ್ಲು ನೋವು. ತೆಗೆಸಲೆಂದು ದಂತವೈದ್ಯರಲ್ಲಿಗೆ ಹೋಗಿದ್ದ. ಸಂತಾನಿಗೆ ಹಲ್ಲು ತೆಗೆಯುವಾಗ ಹೆದರಿಕೆಯಾಗದಿರಲಿ ಅಂತ ವೈದ್ಯರು ವಿಸ್ಕಿ ಕುಡಿಸಿದ್ದರು.
ಡಾಕ್ಟರ್: ಈಗ ನಿಮ್ಗೆ ಧೈರ್ಯ ಬಂತಾ?
ಸಂತಾ: ಇಲ್ಲ.
ಡಾಕ್ಟರ್ ಮತ್ತೂ ಸ್ವಲ್ಪ ವಿಸ್ಕಿ ಕೊಟ್ಟ ನಂತರ: ಈಗ?
ಸಂತಾ (ಧಿಗ್ಗನೆದ್ದು): ನನ್ನ ಬಾಯಿಗೆ ಯಾರು ಕೈ ಹಾಕ್ತಾರೋ ನೋಡ್ತೀನಿ... ಮುಂದೆ ಬನ್ನಿ.. ನಿಮ್ಗೆ ಗತಿ ಕಾಣಿಸ್ತೇನೆ...!