ಪ್ರಾಥಮಿಕ ಶಾಲೆಯ ಮಕ್ಕಳು ಮಧ್ಯಾಹ್ನದ ಊಟಕ್ಕಾಗಿ ಪಾಕಶಾಲೆಯಲ್ಲಿ ಸಾಲು ನಿಂತಿದ್ದರು. ಟೇಬಲ್‌ನ ಒಂದು ಬದಿಯಲ್ಲಿ ಪಾತ್ರೆಯ ತುಂಬಾ ಸೇಬು ಹಣ್ಣಿನ ಹೋಳುಗಳನ್ನಿಟ್ಟಿದ್ದರು. ಅದರ ಮೇಲೆ ಒಂದು ಚೀಟಿಯೂ ಇತ್ತು. ಅದರಲ್ಲಿ ಹೀಗೆ ಬರೆದಿತ್ತು 'ಒಂದು ಮಾತ್ರ ತೆಗೆದುಕೊಳ್ಳಿ. ದೇವರು ನೋಡುತ್ತಿದ್ದಾನೆ'. ಸ್ವಲ್ಪ ಮುಂದಕ್ಕೆ ಹೋದಾಗ, ಇನ್ನೊಂದು ಟೇಬಲ್‌ನಲ್ಲಿ ಚಾಕಲೇಟ್‌ಗಳನ್ನು ಇಟ್ಟಿದ್ದರು. ಅದನ್ನು ನೋಡಿದ ಒಬ್ಬ ತುಂಟ ಹುಡುಗ 'ನಿಮಗೆ ಬೇಕಾದಷ್ಟು ತೆಗೆದುಕೊಳ್ಳಿ. ದೇವರು ಸೇಬನ್ನು ನೋಡುತ್ತಿದ್ದಾರೆ' ಎಂಬ ಚೀಟಿ ಮಾಡಿ ಅಂಟಿಸಿದನು.