ಕೋರ್ಟಿನಲ್ಲಿ ಕೇಸೊಂದರ ವಿಚಾರಣೆ ನಡೆಯುತ್ತಿತ್ತು. ವಕೀಲರು ಕಕ್ಷಿದಾರನಿಗೆ ಕೇಳಿದರು "ಈ ಕೇಸ್ ಮುಚ್ಚಿಹಾಕಲು ನೀನು 5000 ರೂಪಾಯಿ ತೆಗೆದುಕೊಂಡಿದ್ದು ನಿಜವೇ?" ಅಪರಾಧಿಯು ಈ ಮಾತನ್ನು ಕೇಲಿಯೂ ಕೇಳದ ಹಾಗೆ ಅತ್ತ ಇತ್ತ ನೋಡುತ್ತಿದ್ದ. ವಕೀಲರು ಮತ್ತೊಮ್ಮೆ ದೊಡ್ಡ ಧ್ವನಿಯಲ್ಲಿ ಕೇಳಿದರು "ನಿಮ್ಮನ್ನೇ ಕೇಳುತ್ತಿರುವುದು, ಈ ಕೇಸ್ ಮುಚ್ಚಿಹಾಕಲು ನೀನು 5000 ರೂಪಾಯಿ ತೆಗೆದುಕೊಂಡಿದ್ದು ನಿಜವೇ?" ಈಗಲೂ ಅಪರಾಧಿಯು ಉತ್ತರಿಸಲಿಲ್ಲ. ಅಂತಿಮವಾಗಿ ನ್ಯಾಯಾಧೀಶರು ಕೇಳಿದರು "ದಯವಿಟ್ಟು ಉತ್ತರಿಸಿ", ಕಕ್ಷಿದಾರ ಆಶ್ಚರ್ಯದಿಂದ "ಓಹ್, ವಕೀಲರು ನಿಮಗೆ ಕೇಳುತ್ತಿದ್ದಾರೆಂದು ನಾನೆಂದುಕೊಂಡಿದ್ದೆ"!!!