ದಂಪತಿಗಳು ಹೀಗೆ ಕಾರಿನಲ್ಲಿ ಹೋಗುತ್ತಿರುವಾಗ, ಭೀಕರವಾದ ಅಪಘಾತ ಸಂಭವಿಸಿತು. ಅದರಲ್ಲಿ ಕಾರು ಮಾತ್ರ ತುಂಬಾ ಹಾನಿಗೀಡಾಯಿತು. ಆಶ್ಟರ್ಯವೆಂಬಂತೆ ಅವರಿಬ್ಬರಿಗೆ ಏನೂ ಆಗಲಿಲ್ಲ. ಕಾರಿನಿಂದ ಇಳಿದ ನಂತರ ಹೆಂಡತಿಯು ಗಂಡನಲ್ಲಿ "ನಿಜವಾಗಲೂ ಇದು ಅದ್ಭುತ, ಕಾರು ಮಾತ್ರ ಪುಡಿಪುಡಿಯಾಗಿದೆ, ಆದರೆ ನಮಗೆ ಏನೂ ಆಗಲಿಲ್ಲ, ಇದು ದೇವರಕೃಪೆ ಇರಬೇಕು. ಇದರರ್ಥ ನಾವು ಉಳಿದ ಕಾಲವನ್ನು ಸುಖವಾಗಿ ಕಳೆಯಬೇಕು ಎಂದಿರಬಹುದು, ಮತ್ತೆ ಮುಂದುವರಿಸಿದಳು, ಕಾರು ಪೂರ್ತಿ ಹಾನಿಯಾದರೂ ಈ ವೈನ್ ಬಾಟಲ್ ಮಾತ್ರ ಒಡೆಯಲಿಲ್ಲ. ಈ ವೈನ್ ಕುಡಿದು ಆನಂದಿಸಿ ಎಂಬುದೇ ಇದರರ್ಥ. ನಂತರ ಅವಳು ಆ ಬಾಟಲ್ ಗಂಡನಿಗೆ ನೀಡಿದಳು. ಅವನು ಮುಚ್ಚಳವನ್ನು ತೆರೆದು "ನೀನು ಮೌದಲು ಕುಡಿ" ಎಂದನು, ಅವಳು ಪೂರ್ತಿಯಾಗಿ ಕುಡಿದು, ಇನ್ನೂ ಉಳಿದಿದೆಯಾ? ಅದಕ್ಕೆ ಅವನು, " ಇಲ್ಲ, ನಾನು ಪೊಲೀಸರಿಗಾಗಿ ಮಾತ್ರ ಕಾಯುತ್ತಿದ್ದೇನೆ" ಎಂದನು.