ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಪಾಠದ ಮಧ್ಯೆ ಚರ್ಚ್‌ನ ಬಗ್ಗೆ ಏನೊ ಒಂದು ವಿಷಯ ಬಂದಿತು. ಆಗ ಶಿಕ್ಷಕಿ ವಿಧ್ಯಾರ್ಥಿಗಳಲ್ಲಿ 'ಚರ್ಚ್‌ನಲ್ಲಿ ಯಾಕೆ ಗಲಾಟೆ ಮಾಡಬಾರದು, ಯಾವಾಗಲೂ ಶಾಂತವಾಗಿರಬೇಕು' ಎಂದು ಕೇಳಿದರು. ಆಗ ಪುಟಾಣಿ ತುಂಟ ಹುಡುಗ ಹೀಗೆಂದು ಉತ್ತರಿಸಿದನು 'ಏಕೆಂದರೆ, ಜನರು ನಿದ್ರೆ ಮಾಡುತ್ತಿರುವಾಗ ನಾವು ಅವರಿಗೆ ತೊಂದರೆ ಕೊಡಬಾರದು'.