ಹೊಸದಾಗಿ ಕೆಲಸಕ್ಕೆ ಸೇರಿದ್ದ ಹುಡುಗನಿಗೆ ಯಜಮಾನರು ಹೇಳಿದರು
"ನಾನು ಯಾರಿಗೆ ಫೋನ್ ಡಯಲ್ ಮಾಡಲು ಅಂತೀನೋ ಅವರ ನಂಬರ್ ಹುಡುಕಿ ಡಯಲ್ ಮಾಡಿ ಪೋನ್ ನನಗೆ ಕೊಡಬೇಕು ಅದೇ ನಿನ್ನ ಕೆಲಸ".
ಸಲ್ವ ಸಮಯದ ನಂತರ ಷಡಕ್ಷರಿ ಅವರ ನಂಬರ್ ಹುಡುಕಲು ಹೇಳಿದ ಯಜಮಾನ, ಅರ್ಧ ಗಂಟೆ ಬಳಿಕ ಯಜಮಾನ ಹುಡುಗನನ್ನು ಕೇಳಿದ,
"ಷಡಕ್ಷರಿ ಅವರ ನಂಬರ್ ಸಿಕ್ತಾ?"
ಡೈರೆಕ್ಟರಿ ನೋಡುತ್ತ " ಕೆ ವರೆಗೊ ಬಂದಿದ್ದೇನೆ ಎರಡು ನಿಮಿಷದಲ್ಲಿ ತಲುಪೇ ಬಿಡ್ತೀನಿ"