Article Jokes In Kannada %e0%b2%9f%e0%b3%86%e0%b2%b2%e0%b2%bf%e0%b2%ab%e0%b3%8b%e0%b2%a8%e0%b3%8d 110071500071_1.htm

Select Your Language

Notifications

webdunia
webdunia
webdunia
webdunia

ಟೆಲಿಫೋನ್

ಕನ್ನಡ ಜೋಕ್
ಅಂದು ಅವನಿಗೆ ಹೊಸ ಆಫೀಸ್. ತನ್ನ ಪ್ರತಿಷ್ಠೆಯನ್ನು ತೋರಿಸಬೇಕು ಎಂಬ ಹಂಬಲ. ಬಾಸ್ ಎಂಬ ನಾಮಫಲಕ. ಹೊಸ ವಾತಾವರಣ. ತನ್ನ ಸ್ಥಾನದಲ್ಲಿ ಸ್ವಲ್ಪ ಹೊತ್ತಿನ ನಂತರ ಯಾರೋ ಒಬ್ಬರು ಬಂದು ಬಾಗಿಲು ಬಡಿದಾಗ, ಅವನು ಫೋನ್ ಎತ್ತಿಕೊಂಡು, ಅವನನ್ನು ಒಳಗೆ ಬರಲು ಹೇಳಿ, ಫೋನ್‌ನಲ್ಲಿ "ಹೌದು, ನಾನು ನಿಮ್ಮನ್ನು ಈ ಸಂಜೆ ಬಂದು ಕಾಣುತ್ತೇನೆ. ನಿಮ್ಮ ಮೆಸೇಜ್ ಕೂಡ ಕಳುಹಿಸುತ್ತೇನೆ. ಕಾಲ್ ಮಾಡಿದ್ದಕ್ಕೆ ಥ್ಯಾಂಕ್ಸ್ ಸರ್" ಎಂದನು. ತಾನು ಅವನಲ್ಲಿ ಸಾಕಷ್ಟು ಪ್ರತಿಷ್ಠೆಯನ್ನು ತೋರಿಸಿದ್ದೇನೆ ಎಂದುಕೊಂಡು, "ಏನು?" ಎಂದನು. "ಪ್ರಮುಖವಾದದ್ದೇನು ಇಲ್ಲ ಸರ್, ನಾನು ನಿಮ್ಮ ಟೆಲಿಫೋನ್ ಸರಿಪಡಿಸಲು ಬಂದೆ" ಎಂದನು.

Share this Story:

Follow Webdunia kannada