ಎಂಟು ವರ್ಷದ ಅನಿತಾ ಶಾಲೆಯಿಂದ ತನ್ನ ತಿಂಗಳ ಪ್ರಗತಿಯ ವರದಿಯನ್ನು ತಂದಳು. ವರದಿಯಲ್ಲಿ ಶಿಕ್ಷಕಿಯು ಎಲ್ಲಾ ವಿಷಯದಲ್ಲೂ ಉತ್ತಮ ಅಂಕವನ್ನೇ ನೀಡಿ, ಕೆಳಗಡೆ "ಅನಿತಾ ಒಳ್ಳೆಯ ಹುಡುಗಿ, ಆದರೆ ಅವಳಲ್ಲಿ ಒಂದು ಕೊರತೆ ಇದೆ. ಅವಳು ಶಾಲೆಯಲ್ಲಿ ತುಂಬಾ ಮಾತನಾಡುತ್ತಾಳೆ. ಅದಕ್ಕಾಗಿ ನನ್ನಲ್ಲಿ ಉಪಾಯವೊಂದಿದ್ದು, ಅದು ಅವಳ ಈ ಚಟವನ್ನು ತಪ್ಪಿಸಬಹುದು" ಎಂದು ಟಿಪ್ಪಣಿ ಬರೆದಿದ್ದರು. ಅನಿತಾಳ ತಂದೆಯು ವರದಿಗೆ ಸಹಿ ಮಾಡಿ ತಾವೂ ಸಹ ಟಿಪ್ಪಣಿ ಸೇರಿಸಿದರು "ದಯವಿಟ್ಟು ನಿಮ್ಮ ಉಪಾಯವನ್ನು ನನಗೂ ತಿಳಿಸಿದರೆ ಒಳ್ಳೆಯದು, ಅದನ್ನು ಅವರ ತಾಯಿಯ ಮೇಲೆ ನಾನು ಪ್ರಯೋಗಿಸಬೇಕೆಂದಿದ್ದೇನೆ".