ಗುಂಡಜ್ಜ ತನ್ನ 100 ನೇ ಜನ್ಮದಿನವನ್ನು ಆಚರಿಸಿಕೊಂಡರು. ಜನ್ಮದಿನದ ಕಾರ್ಯಕ್ರಮದಂದು ಪ್ರತಿಯೊಬ್ಬರೂ ಅವರನ್ನು ಅಭಿನಂದಿಸಿದರು ಮತ್ತು ಅವರ ಆರೋಗ್ಯಪೂರ್ಣ ಜೀವನದ ರಹಸ್ಯವನ್ನು ತಿಳಿಯಲು ಬಯಸಿದರು. "ನಾನು ನಿಮಗೆ ನನ್ನ ಯಶಸ್ವಿ 100 ವರ್ಷದ ರಹಸ್ಯವನ್ನು ತಿಳಿಸಲು ಬಯಸುತ್ತೇನೆ". ಗುಂಡಜ್ಜ ನುಡಿದ. "ನಾನು ಮತ್ತು ನನ್ನ ಪತ್ನಿಯು 75 ವರ್ಷಗಳಿಂದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದೇವೆ. ಮದುವೆಯ ದಿನ ನಾವು ಒಂದು ತೀರ್ಮಾನ ತೆಗೆದುಕೊಂಡಿದ್ದೆವು. ನಾವು ಜಗಳವಾಡಿದಾಗಲೆಲ್ಲಾ, ನಾವು ತಪ್ಪು ಮಾಡಿರುತ್ತಾರೋ ಅವರು ಹೊರಗಡೆ ಹೋಗಿ ನಡೆದಾಡಬೇಕೆಂದು. ಪ್ರೀತಿಪಾತ್ರರೇ, ನಾನು ಕಳೆದ 75 ವರ್ಷಗಳಿಂದಲೂ ಪ್ರತಿದಿನ ಹೊರಗಡೆ ತಿರುಗಾಟ ಮಾಡುತ್ತಲೇ ಬಂದಿದ್ದೇನೆ."