ಉನ್ನತ ಮಿಲಿಟರಿ ಅಧಿಕಾರಿಯಾಗಿದ್ದ ಸಂತಾನನ್ನು ಆಸ್ಪತ್ರೆಯ "ಮೇಜರ್ ಆಪರೇಶನ್ ಥಿಯೇಟರ್" ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಸಂತಾ ಭಾಷಣ ಮಾಡುತ್ತಾ, "ನೋಡಿ, ರೋಗಿಗಳಿಗೆ ಅವರ ಅಧಿಕಾರ ಆಧರಿಸಿ ಚಿಕಿತ್ಸೆ ನೀಡಬಾರದು. ಸೈನಿಕರಿಂದ ಜನರಲ್‌ವರೆಗೆ ಎಲ್ಲರೂ ದೇಶರಕ್ಷಣೆಗಾಗಿ ಕೆಲಸ ಮಾಡುವಾಗ, ನೀವು ಮೇಜರ್‌ಗಳಿಗೆ ಮಾತ್ರ ಆಪರೇಶನ್ ಥಿಯೇಟರ್ ಇಡುವುದು ತಪ್ಪು." ಅಂದ. ವೈದ್ಯರಲ್ಲಿ ಗುಸುಗುಸು ಶುರುವಾಯಿತು. ವೈದ್ಯಾಧಿಕಾರಿಗಳು ಸಂತಾಗೆ ಕಷ್ಟಪಟ್ಟು, "ಮೇಜರ್ ಆಪರೇಶನ್ ಥಿಯೇಟರ್" ಅಂದರೆ ಏನು ಎಂದು ವಿವರಿಸಿದ. ಆ ಕ್ಷಣಕ್ಕೆ ಸಂತಾ ಸುಮ್ಮನಾದ. ನಂತರ ಆಸ್ಪತ್ರೆ ಸುತ್ತುತ್ತಿದ್ದ. ಸಂತಾ ಅಧಿಕಾರಿಗಳಿಗೆ ಇನ್ನೊಂದು ಬೋರ್ಡ್ ತೋರಿಸಿದ. ಅದನ್ನು ನೋಡಿದ ಅಧಿಕಾರಿಗಳಿಗೆ ಸುಸ್ತು! ಕಾರಣ ಆ ಬೋರ್ಡಿನ ಮೇಲೆ "ಜನರಲ್ ವಾರ್ಡ್" ಎಂದು ಬರೆಯಲಾಗಿತ್ತು!!