ತನ್ನ ಗಂಡನಿಗೆ ಸೌಖ್ಯವಿಲ್ಲದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋದಳು. ಚೆಕ್‌ಅಪ್ ನಂತರ ಡಾಕ್ಟರ್ ಹೆಂಡತಿಯನ್ನು ಕರೆದು, "ನಿಮ್ಮ ಗಂಡ ಗಂಭೀರವಾದ ರೋಗ ಮತ್ತು ಒತ್ತಡದಿಂದ ನರಳುತ್ತಿದ್ದಾರೆ. ಹಾಗಾಗಿ ಅವರನ್ನು ಸರಿಯಾಗಿ ನೋಡಿಕೊಳ್ಳಬೇಕು. ಬೆಳಿಗ್ಗೆ ಸರಿಯಾಗಿ ತಿಂಡಿ, ವ್ಯಾಯಾಮ ಮಾಡಿಸಬೇಕು. ಒಳ್ಳೆಯ ವಾತಾವರಣವನ್ನು ನಿರ್ಮಿಸಬೇಕು. ಊಟಕ್ಕೆ ಸೊಪ್ಪು, ತರಕಾರಿಯನ್ನು ಬಳಸಿ. ರಾತ್ರಿ ಊಟಕ್ಕೆ ಒಳ್ಳೆಯ ಅಡುಗೆ ಮಾಡಿ. ನಿಮ್ಮ ಸಸ್ಯೆಗಳನ್ನೆಲ್ಲ ಅವರಲ್ಲಿ ಹೇಳಬೇಡಿ. ಇದರಿಂದ ಒತ್ತಡ ಹೆಚ್ಚಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ತುಂಬಾ ಪ್ರೀತಿಸಿ, ಮತ್ತು ಅವರ ಆಸೆಗಳನ್ನೆಲ್ಲ ಪೂರೈಸಿ,10 ತಿಂಗಳವರೆಗೆ ಹೀಗೆ ಮಾಡಿದರೆ, ನಿಮ್ಮ ಗಂಡ ಪೂರ್ಣವಾಗಿ ಗುಣಮುಖರಾಗಬಹುದು." ಎಂದರು. ಸರಿ ಎಂದು ಮನೆಗೆ ಹಿಂತಿರುಗುವಾಗ, ಅವನು,"ನಿನ್ನ ಬಳಿ ಡಾಕ್ಟರ್ ಏನೆಂದು ಹೇಳಿದರು" ಎಂದು ಕೇಳಿದನು. "ನೀವು ಇಂದು ಸಾಯುತ್ತಿರಂತೆ" ಎಂದಳು.