ಗೃಹಣಿಯೊಬ್ಬರು ಒಂದು ದಿನದ ಮಟ್ಟಿಗೆ ಬೇರೆ ಊರಿಗೆ ಹೋಗಬೇಕಿತ್ತು. ಮುಂದಿನ ಬಾಗಿಲನ್ನು ಹಾಕಿ ಹಾಲಿನವನಿಗೆ ಒಂದು ಚೀಟಿ ಬರೆದು ಸಿಕ್ಕಿಸಿದಳು. ಏನನ್ನೂ ಬಿಟ್ಟು ಹೋಗಬೇಡ; ನಾವು ಯಾರು ಮನೆಯಲ್ಲಿ ಇರೋಲ್ಲ. ಮಾರನೆಯ ದಿನ ಅವರು ಊರಿನಿಂದ ಹಿಂದಿರುವಾಗ ಮುಂದಿನ ಬಾಗಿಲು ಮುರಿದಿತ್ತು. ಅಲ್ಲೊಂದು ಚೀಟಿ ನೇತಾಡ್ತಿತ್ತು- ನೀವು ಹೇಳಿದ ಹಾಗೆ ನಾವೇನೂ ಬಿಟ್ಟು ಹೋಗಿಲ್ಲ.