ಅಂಗನವಾಡಿಯ ಟೀಚರ್ ಮಕ್ಕಳು ಚಿತ್ರ ಬಿಡಿಸುವುದನ್ನು ಗಮನಿಸುತ್ತಿದ್ದರು. ಮಕ್ಕಳು ಹೇಗೆ ಚಿತ್ರ ಬಿಡಿಸುತ್ತಾರೆ ಎಂಬುದನ್ನು ಪರಿಶೀಲಿಸಲು ಕೆಲವೊಮ್ಮೆ ಟೀಚರ್ ಅವರ ಹತ್ತಿರ ಹೋಗಿ ನೋಡುತ್ತಿದ್ದರು. ಆಗ ಒಂದು ಪುಟ್ಟ ಹುಡುಗಿ ತುಂಬಾ ಶ್ರದ್ಧೆಯಿಂದ ಚಿತ್ರ ಬಿಡಿಸುವುದರಲ್ಲಿ ತಲ್ಲೀನವಾಗಿರುವುದನ್ನು ಗಮನಿಸಿದ ಟೀಚರ್ ಅವಳಲ್ಲಿ 'ನೀನು ಏನು ಬಿಡಿಸುತ್ತಿದ್ದೀಯ?' ಎಂದು ಕೇಳಿದರು. ಹುಡುಗಿ 'ನಾನು ದೇವರ ಚಿತ್ರ ಬಿಡಿಸುತ್ತಿದ್ದೇನೆ' ಎಂದಳು. ಅದಕ್ಕೆ ಟೀಚರ್ 'ಆದರೆ ದೇವರು ಹೇಗಿರುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ ಅಲ್ಲ' ಎಂದರು. ಚಿತ್ರ ಬಿಡಿಸುವುದರಲ್ಲೇ ಮಗ್ನವಾಗಿ ಪುಟ್ಟ ಹುಡುಗಿ 'ಅವರಿಗೆಲ್ಲ ಇನ್ನು ಸ್ವಲ್ಪ ಹೊತ್ತಿನಲ್ಲಿ ಗೊತ್ತಾಗುತ್ತದೆ' ಎಂದು ಹೇಳಿದಳು.