"ಸಂತಾ ಚಿಕನ್ ಕಬಾಬ್ ವ್ಯಾಪಾರ ಶುರು ಮಾಡಿದ. ಅವನು ಒಂದು ದಿನ ಬೆರಕೆಯ ಮಾಂಸ ಆರೋಪದ ಮೇಲೆ ಬಂಧಿಸಲ್ಪಟ್ಟ. ತಾನು ಕೋಳಿ ಮಾಂಸದ ಜೊತೆ ಬೇರೆ ಮಾಂಸವನ್ನು ಬೆರೆಸುತ್ತಿದ್ದೇನೆಂದು ಕೋರ್ಟಿನಲ್ಲಿ ಒಪ್ಪಿಕೊಂಡ.
ನ್ಯಾಯಾಧೀಶ : ಚಿಕನ್‌ಗೆ ಬೇರೆ ಯಾವ ಮಾಂಸ ಬೆರೆಸುತ್ತಿದ್ದೆ?
ಸಂತಾ : ಕುದುರೆ ಮಾಂಸ ಮಹಾಸ್ವಾಮಿ
ನ್ಯಾಯಾಧೀಶ : ಎಷ್ಟು ಬೆರಕೆ ಮಾಡ್ತಿದ್ದೆ?
ಸಂತಾ : ಸಮವಾಗಿ ಬೆರಕೆ ಮಾಡ್ತಾಯಿದ್ದೆ ಮಹಾಸ್ವಾಮಿ.
ನ್ಯಾಯಾಧೀಶ : ಸಮ ಅಂದ್ರೆ ಏನರ್ಥ?
ಸಂತಾ : ಒಂದು ಕೋಳಿಗೆ ಒಂದು ಕುದುರೆ ಬೆರೆಸುತ್ತಿದ್ದೆ ಮಹಾಸ್ವಾಮಿ."