ಇತ್ತೀಚೆಗೆಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದ ಗುಂಡ, ತನ್ನ ಗೆಳೆಯನಲ್ಲಿ ಸಿನಿಮಾದ ಬಗ್ಗೆ ಚರ್ಚಿಸುತ್ತಿದ್ದ. ಮಾತಿನ ಮಧ್ಯೆ, ಸಿನಿಮಾಗೂ ನಿಜಜೀವನಕ್ಕೂ ಎಷ್ಟು ವ್ಯತ್ಯಾಸವಿದೆಯಲ್ಲಾ ಎಂದು ಹೇಳಿದ.
ಆಗ ಗೆಳೆಯನು ಏನು ವ್ಯತ್ಯಾಸ ಎಂದು ಕೇಳಿದಾಗ ಗುಂಡನು ಸಿನಿಮಾದಲ್ಲಿ ಕಷ್ಟಗಳೆಲ್ಲಾ ಮುಗಿದಮೇಲೆ ಕೊನೆಯಲ್ಲಿ ವಿವಾಹವಾಗುತ್ತಾರೆ ಆದರೆ ನಿಜಜೀವನದಲ್ಲಿ ಮದುವೆಯಾದಮೇಲೆ ಕಷ್ಟಗಳು ಪ್ರಾರಂಭವಾಗುತ್ತದೆ ಎಂದ.