"ಬಸ್ಸು ತುಂಬಾ ಜನಭರಿತವಾಗಿತ್ತು. ಒಬ್ಬ ವ್ಯಕ್ತಿ ಒಳಗೆ ನುಸುಳಲು ಬಹಳ ಪ್ರಯತ್ನ ಪಡುತ್ತಿದ್ದ, ಒಳಗೆ ಹೋಗಲು ಇತರ ಪ್ರಯಾಣಿಕರು ಅನುವು ಮಾಡುತ್ತಿರಲಿಲ್ಲ.
ಆದರೆ ಆತ ಪ್ರಯಾಣಿಕರನ್ನು ಹೇಗೊ ತಳ್ಳಿಕೊಂಡು ಒಳಗೆ ನುಸುಳಿದಾಗ ಯಾರೋ ಕೇಳಿದರು.
ಯಾರ್ರಿ ಅದು ಗೂಳಿತರ ನುಗ್ಗುತ್ತಾ ಇದ್ದಿರಿ ಎಂದು.
ಆ ವ್ಯಕ್ತಿ ಶಾಂತವಾಗಿ ಹೇಳಿದ ನಾನು ಈ ಬಸ್ಸಿನ ನಿರ್ವಾಹಕನಪ್ಪ."