ಮಗನಿಂದ ಕಿರಿಕಿರಿಗೊಳಗಾದ ತಂದೆ ತನ್ನ ಗಲ್ಫ್ ಮಿತ್ರನಿಗೆ ಫೋನಾಯಿಸಿ 'ನಾನು ಸಣ್ಣವನಿರುವಾಗ ಏನಾದರೂ ಕಿರಿಕಿರಿ ಮಾಡಿದರೆ ನನ್ನ ಅಪ್ಪ ಅಮ್ಮ ನನ್ನನ್ನು ನನ್ನ ರೂಮ್‌ನಲ್ಲಿ ಕೂಡಿಹಾಕಿ, ರಾತ್ರಿಯ ಊಟವನ್ನೇ ನೀಡುತ್ತಿರಲಿಲ್ಲ. ಆದರೆ ನನ್ನ ಮಗನ ರೂಮ್‌ನಲ್ಲಿ ಕಲರ್ ಟಿವಿ, ಫೋನ್, ಕಂಪ್ಯೂಟರ್, ಸಿಡಿ ಪ್ಲೇಯರ್ ಎಲ್ಲವೂ ಇದೆ' ಎಂದು ಕಷ್ಟ ತೋಡಿಕೊಂಡನು. ಅದಕ್ಕೆ ಸ್ನೇಹಿತ 'ಹಾಗಾದರೆ ಅವನನ್ನು ನೀನು ಹೇಗೆ ನಿಭಾಯಿಸುತ್ತೀ?' ಎಂದು ಕೇಳಿದನು. ಆಗ ತಂದೆ 'ನಾನು ಅವನನ್ನು ನನ್ನ ರೂಮ್‌ಗೆ ಕಳುಹಿಸುತ್ತೇನೆ' ಎಂದುತ್ತರಿಸಿದನು.