ಒಬ್ಬ ಅಮೇರಿಕಾದವನು ಭಾರತಕ್ಕೆ ಮೊದಲ ಬಾರಿ ಬಂದಿದ್ದನು. ಹಿಂದಿಯಲ್ಲಿ 'ಮಿನಿಮಮ್(ಕನಿಷ್ಟ) ' ಗೆ ಏನು ಹೇಳುತ್ತಾರೆ ಎಂದು ಕೇಳುತ್ತಾನೆ. ಒಬ್ಬ ವ್ಯಕ್ತಿ 'ಕಮ್ ಸೆ ಕಮ್' ಎಂದು ಹೇಳಿಕೊಡುತ್ತಾನೆ. ಮರುದಿನ ಆ ಅಮೇರಿಕಾದವನು ಭಾರತೀಯನೊಟ್ಟಿಗೆ ಮಾತನಾಡುವಾಗ 'ನಮ್ಮ ಅಮೇರಿಕಾದಲ್ಲಿ ಗರಿಷ್ಟ ಮಟ್ಟದ ಚಳಿ ಇದೆ' ಎಂದು ಹೇಳಬಯಸಿ ಹೀಗೆ ಹೇಳುತ್ತಾನೆ 'ವಿ ಹಾವ್ ಗೊ ಸೆ ಗೊ ಕೋಲ್ಡ್ ಇನ್ ಅಮೇರಿಕಾ' (ಕಮ್ ಸೆ ಕಮ್ ಪದದ ವಿರುದ್ಧ ಪದ).