ಗಂಡ ಹೆಂಡತಿರ ಮಧ್ಯೆ ಏನೋ ಸಮಸ್ಯೆಯಿಂದ ಜಗಳವಾಗಿ, ಮಾತು ನಿಂತು, ಮೌನ ಆವರಿಸಿತ್ತು. ಯಾರು ಪ್ರಾರಂಭಿಸುವವರು ಎಂಬ ಗೊಂದಲವೂ ಇತ್ತು, ಸ್ವಾಭಿಮಾನವೂ ಅಡ್ಡ ಬರುತ್ತಿತ್ತು. ತಕ್ಷಣವೇ, ತಾನು ನಾಳೆ ಬೆಳಿಗ್ಗೆ 5.00 ಗಂಟೆಗೆ ಏಳಬೇಕು, ಇಲ್ಲದಿದ್ದರೆ ತನ್ನ ವ್ಯವಹಾರಕ್ಕೆ ಹಾನಿಯಾಗಲಿದೆ. ತಾನು ಹಹೊರಡಬೇಕಾಗಿರುವ ವಿಮಾನವನ್ನು ತಪ್ಪಿಸಿಕೊಳ್ಳುತ್ತೇನೆ ಎಂದು ಅರಿವಿಗೆ ಬಂದರೂ ಹೇಗೆ ಹೇಳುವುದುದೆಂದು ಯೋಚಿಸಿ, ಕೊನೆಗೆ, "ನಾಳೆ ಬೆಳಿಗ್ಗೆ ನನ್ನನ್ನು 5.00 ಗಂಟೆಗೆ ಎಬ್ಬಿಸು" ಎಂದು ಕಾಗದದಲ್ಲಿ ಬರೆದು ಅವಳಿಗೆ ಸಿಗುವಂತಹ ಜಾಗದಲ್ಲಿ ಇಟ್ಟನು. ಬೆಳಿಗ್ಗೆ ಎದ್ದಾಗ ಗಂಟೆ 9.00 ಬಾರಿಸಿತ್ತು. ತನ್ನ ವ್ಯವಹಾರ ಹಾಳಾಯಿದೆಂದು, ಯಾಕೆ ಅವಳು ಎಬ್ಬಿಸಲಿಲ್ಲವೆಂದು ಕೇಳಲು ಹೊರಡುವಾಗ, ಬೆಡ್‌ನ ಪಕ್ಕದಲ್ಲಿರುವ ಒಂದು ಕಾಗದದ ಚೂರು ಕಣ್ಣಿಗೆ ಕಾಣಿಸಿತು. ಅದರಲ್ಲಿ, "5.00 ಗಂಟೆಯಾಯಿತು, ಏಳಿ" ಎಂದು ಬರೆದಿತ್ತು.