ಗಡ್ಡ ಮೀಸೆ ಭರ್ತಿ ಬಿಟ್ಟಿದ್ದ ಆತ ಅಂದು ತನ್ನ ಪತ್ನಿಯನ್ನು ಬೇಸ್ತು ಬೀಳಿಸಬೇಕೆಂದು ಕೊಂಡು ನುಣ್ಣಗೆ ಕ್ಷೌರ ಮಾಡಿಸಿಕೊಂಡು ಮನೆಗೆ ಬಂದ.
ಅಷ್ಟೊತ್ತಿಗಾಗಲೇ ಪತ್ನಿ ಹಾಸಿಗೆಯಲ್ಲಿ ನಿದ್ದೆಗೆ ಜಾರಿದ್ದಳು. ಈ ವೇಳೆ ಭರದಿಂದ ಊಟ ಮುಗಿಸಿದ ಆತ ಪತ್ನಿಯ ಪಕ್ಕ ಮಲಗಿಕೊಂಡ.
ಎಚ್ಚರಗೊಂಡ ಆಕೆ ಕತ್ತಲಲ್ಲೇ ಅವನ ಮುಖ ಮೂತಿ ತಡಕಾಡಿ, ಅಯ್ಯಯ್ಯೋ ನೀವಿನ್ನೂ ಹೋಗಿಲ್ವಾ, ಗಂಡ ಬರೋ ಹೊತ್ತಾಯ್ತು ಎಂದು ಕಿರುಚಿದಳು!