ಕೆಲವು ಕ್ಷೌರಿಕರು ಒಳ್ಳೆಯವರಿರುತ್ತಾರೆ. ಅಂತಹ ಕ್ಷೌರಿಕನೊಬ್ಬನ ಬಳಿ ನಡೆದ ಘಟನೆ. ಒಮ್ಮೆ ಹೂ ಮಾರುವವನು ಕ್ಷೌರಕ್ಕೆ ಹೋದ, ಕೆಲಸ ಮುಗಿದ ಬಳಿಕ ಅವನು ಹಣವನ್ನು ನೀಡಲು ಹೋದಾಗ, ನಾನು ಸಮಾಜ ಸೇವೆ ಮಾಡುತ್ತಿರುವೆನಾದ್ದರಿಂದ ಹಣವನ್ನು ಸ್ವೀಕರಿಸುವುದಿಲ್ಲ ಎಂದು ಕ್ಷೌರಿಕ ಹಣವನ್ನು ನಿರಾಕರಿಸಿದ. ಮರುದಿನ ಕ್ಷೌರಿಕನು ಅಂಗಡಿ ತೆರೆಯಲು ಹೋದಾಗ ಅವನ ಅಂಗಡಿಯ ಮುಂದೆ ಧನ್ಯವಾದ ಸಂದೇಶದೊಂದಿಗೆ ಹಲವಾರು ಹೂವಿನ ಗುಚ್ಛಗಳು ಕಾಣಿಸಿದವು. ಮುಂದಿನ ದಿನ ಸಾಫ್ಟ್‌ವೇರ್ ಇಂಜಿನೀಯರ್ ಓರ್ವ ಕ್ಷೌರಿಕನ ಬಳಿ ಹೋದ, ಕ್ಷೌರಿಕ ಹಿಂದಿನಂತೆಯೇ ಹಣವನ್ನು ತೆಗೆದುಕೊಳ್ಳದೇ ನಿರಾಕರಿಸಿದ. ಆದರೆ ಮರುದಿನ ಕ್ಷೌರಿಕ ಅಂಗಡಿ ತೆರೆಯಲು ಬಂದಾಗ ನೂರಾರು ಸಾಫ್ಟ್‌ವೇರ್ ಇಂಜಿನೀಯರ್‌ಗಳು ಕ್ಷೌರದಂಗಡಿಯ ಮುಂದೆ ಫಾರ್ವರ್ಡ್ ಮಾಡಿದ ಪ್ರಿಂಟ್‌ಔಟ್‌ನೊಂದಿಗೆ ಕಾಯುತ್ತಿದ್ದರು