ಕ್ರಿಸ್‌ಮಸ್‌ನ ಮರುದಿನ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಎಲ್ಲರೂ ಹೊರಹೋದರು. ಚರ್ಚ್‌ನ ಪಾದ್ರಿ ಹೀಗೆ ನೋಡುವಾಗ ಬಾಲ ಜೀಸಸ್‌ನ ಪ್ರತಿಮೆ ಕಳೆದುಹೋಗಿರುವುದು ತಿಳಿಯುತ್ತದೆ. ತಕ್ಷಣ ಅವರು ಹೊರಗೆ ಬಂದು ಎಲ್ಲಾ ಕಡೆ ಹುಡುಕುವಾಗ ಒಬ್ಬ ಪುಟ್ಟ ಬಾಲಕ ಬಾಲ ಏಸುವಿನ ಪ್ರತಿಮೆಯನ್ನು ಹಿಡಿದುಕೊಂಡು ಕೆಂಪು ಕಾರಿನಲ್ಲಿ ಕುಳಿತಿರುವುದು ಕಾಣಿಸುತ್ತದೆ. ಹತ್ತಿರ ಬಂದ ಪಾದ್ರಿ ಬಾಲಕನಲ್ಲಿ 'ಪುಟ್ಟಾ, ಈ ಪ್ರತಿಮೆಯನ್ನು ನೀನು ಎಲ್ಲಿಂದ ತಂದೆ?' ಎಂದು ಕೇಳಿದರು. ಬಾಲಕ 'ಚರ್ಚ್‌ನಿಂದ ತಂದೆ' ಎಂದುತ್ತರಿಸಿದನು. ಯಾಕೆ ಎಂದು ಕೇಳಿದುದಕ್ಕೆ ಆ ಹುಡುಗ ಹೀಗೆ ಉತ್ತರಿಸಿದನು 'ಒಂದು ವಾರದ ಹಿಂದೆ ನಾನು ಜೀಸಸ್‌ನಲ್ಲಿ ಈ ಕ್ರಿಸ್‌ಮಸ್‌ಗೆ ನನಗೆ ಕಾರು ಕೊಡಿಸಿದರೆ ನಾನು ಅವನಿಗೆ ನಮ್ಮ ಕಾರಿನಲ್ಲಿ ಒಂದು ರೌಂಡ್ ಕರೆದುಕೊಂಡು ಹೋಗುತ್ತೇನೆ ಎಂದಿದ್ದೆ'.