ಕುಡುಕನೊಬ್ಬ ಮಧ್ಯರಾತ್ರಿ ರಸ್ತೆಯಲ್ಲಿ ತೂರಾಡಿಕೊಂಡು ಹೋಗುತ್ತಿದ್ದಾಗ ಸಂತಾ ಅವನನ್ನು ತಡೆದು, "ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ?" ಎಂದು ಕೇಳಿದ.
ಆತನನ್ನೇ ಮೇಲಿಂದ ಕೆಳಗಿನ ತನಕ ನೋಡಿದ ಕುಡುಕ ಕೊನೆಗೂ ತಡಬಡಾಯಿಸಿ ಉತ್ತರಿಸುತ್ತಾ, "ಮದ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ ಕೇಳಲು" ಎಂದ.
ಆಶ್ಚರ್ಯದಿಂದ ಆತ, "ಹೌದಾ ಎಲ್ಲಿ?" ಎಂದು ಕೇಳಿದ.
ಕುಡುಕ ತೊದಲುತ್ತಾ ಒದರಿದ, "ಮನೆಯಲ್ಲಿ ನನ್ನ ಸ್ವಂತ ಹೆಂಡತಿಯಿಂದ".