ಮಹಿಳೆಯೊಬ್ಬರು ಚಿನ್ನಾಭರಣದ ಮಾರಾಟದ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ನೀಡುವ ಕಲ್ಲುಗಳನ್ನು ಮಾರಾಟ ಮಾಡುವ ಅಂಗಡಿಗೆ ಹೋದಳು. ಅಂಗಡಿಯಾತನಿಗೆ ಅವಳು ತನಗೆ ಸದಾ ಕಾಟ ನೀಡುವ ಅತ್ತೆಯನ್ನು ನಿಯಂತ್ರಿಸುವ ಶಕ್ತಿಯುಳ್ಳ ಕಲ್ಲನ್ನು ನೀಡುವಂತೆ ಕೇಳಿದಳು. ಅಂಗಡಿಯಾತ ನಗುತ್ತಾ ಅವಳಿಗೆ ಹೇಳಿದ "ಮೇಡಮ್, ನಾವು ನೀಡುವ ಹರಳಿನ ಕಲ್ಲಿನ ಬದಲಿಗೆ, ಪಕ್ಕದಲ್ಲೇ ಇರುವ ಚಪ್ಪಡಿ ಕಲ್ಲಿನ ಫ್ಯಾಕ್ಟರಿಯಿಂದ ಕಲ್ಲನ್ನು ತೆಗೆದುಕೊಂಡು ಬಳಸಿದರೆ ಇನ್ನು ಎಂದೆಂದೂ ನಿಮಗೆ ನಿಮ್ಮತ್ತೆಯ ಕಾಟವಿರುವುದಿಲ್ಲ"!!!