ಒಬ್ಬಳು ಮಹಿಳೆ ಗಂಡನಿಗೆ ತುಂಬಾ ಹೊತ್ತಿನಿಂದ ಮೊಬೈಲ್‌ನಲ್ಲಿ ಕಾಲ್ ಮಾಡಲಿಕ್ಕೆ ಪ್ರಯತ್ನಿಸುತ್ತಿದರೂ ಸಹ ಕನೆಕ್ಟ್ ಅಗುತ್ತನೇ ಇರಲಿಲ್ಲ. ಅದಕ್ಕೆ ಅವಳು ತನ್ನ ಮಗನಿಗೆ ಅವನ ಮೊಬೈಲ್‌ನಿಂದಲೇ ತಂದೆಗೆ ಕಾಲ್ ಮಾಡುವಂತೆ ಹೇಳಿದಳು. ಕಾಲ್ ಮಾಡಿದ ಸಣ್ಣ ಹುಡುಗ ತಾಯಿಗೆ 'ಮೂರು ಬಾರಿ ಪ್ರಯತ್ನಿಸಿದಾಗಲೂ ಅಪ್ಪನ ಫೋನ್ ಅನ್ನು ಒಬ್ಬಳು ಹೆಂಗಸು ರಿಸೀವ್ ಮಾಡಿದಳು' ಎಂದನು. ಸಿಟ್ಟುಗೊಂಡವಳು ಗಂಡ ಬರುವವರೆಗೆ ಕಾದಳು. ಗಂಡ ಬಂದ ಕೂಡಲೇ ಜೋರಾಗಿ ಕೂಗಾಡುತ್ತಾ ತರಾಟೆಗೆ ತೆಗೆದುಕೊಂಡಳು. ಗಲಾಟೆಯಿಂದ ಒಟ್ಟುಗೂಡಿದ ಜನರೆಲ್ಲ, ಏನಾಯಿತು ಫೋನ್‌ನಲ್ಲಿ ಮಾತನಾಡಿದ ಹೆಂಗಸು ಏನು ಹೇಳಿದಳು ಎಂದು ಸಣ್ಣ ಹುಡುಗನಲ್ಲಿ ಕೇಳಿದರು. ಆಗ ಹುಡುಗ 'ನೀವು ಪ್ರಯತ್ನಿಸುತ್ತಿರುವ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ' ಎಂದನು.