ಒಬ್ಬನು ಅತಿ ದೊಡ್ಡ ಕಾರ್ಪೊರೇಟ್ ಒಂದಕ್ಕೆ ಟ್ರೈನಿಯಾಗಿ ಸೇರಿದನು. ಅವನ ಮೊದಲ ದಿನ, ಕಚೇರಿಯಲ್ಲಿ, ಪ್ಯಾಂಟ್ರಿಗೆ ನಂಬರ್ ಡೈಯಲ್ ಮಾಡಿ "ನನಗೆ ಒಂದು ಕಪ್ ಕಾಫಿ ತಕ್ಷಣ ಬರಲಿ" ಎಂದು ಸಿಟ್ಟಿನಿಂದ ಕಿರುಚಿದನು. ಇನ್ನೊಂದು ಬದಿಯಿಂದ ಫೋನ್ ಎತ್ತಿಕೊಂಡವನು, "ಹೇ, ಪೆದ್ದ, ನೀವು ತಪ್ಪಾಗಿ ನಂಬರ್ ಡೈಯಲ್ ಮಾಡಿದ್ದಿ. ನಾನು ಯಾರು ಮಾತಾಡುತ್ತಿರುವುದೆಂದು ಗೊತ್ತಾ?" ಎಂದನು. "ಗೊತ್ತಿಲ್ಲ" ಎಂದನು. "ನಾನು ಈ ಕಂಪನಿಯ ಸಿಇಓ" ಎಂದನು. ಮತ್ತೆ ಟ್ರೈನಿಯು, "ನೀನು ಯಾರಲ್ಲಿ ಮಾತನಾಡುತ್ತಿರುದೆಂದು ನಿನಗೆ ಗೊತ್ತಾ?" ಎಂದು ಕೇಳಿದಾಗ, "ಇಲ್ಲ" ಎಂದು ಸಿಇಓ ಹೆದರಿಕೆಯಿಂದ ನುಡಿದನು. "ಒಳ್ಳೆಯದು" ಎಂದು ಹೇಳಿ ಫೋನ್ ಇಟ್ಟನು.