ಒಂದು ಸಂಜೆ, ಹಂಡತಿಯು, ತನ್ನ ಗಂಡನನ್ನು ಕರೆದು, ಮುಂದಿನ ಮನೆಯ ದಂಪತಿಗಳತ್ತ ಅವನ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಳು. "ರೀ, ಅವರನ್ನು ನೋಡಿದ್ರಾ? ಅವರು ಒಬ್ಬನೊಬ್ಬರು ಎಷ್ಟು ಪ್ರೀತಿಸುತ್ತಾರೆ, ಗೊತ್ತಾ? ಅವರು ಭೇಟಿಯಾಗುವ ಪ್ರತಿ ಬಾರಿಯು ಮುತ್ತು ಕೊಡುತ್ತಾರೆ, ನೀವು ಮಾತ್ರ ಯಾಕೆ ಹಾಗೆ ಮಾಡುವುದಿಲ್ಲ" ಎಂದು ಕೇಳಿದಳು. ಅದಕ್ಕೆ ಗಂಡನು, "ನಾನು ಕೂಡ ಹಾಗೆ ಮಾಡಲು ಇಷ್ಟಪಡುತ್ತೇನೆ, ಆದರೆ ಸಮಸ್ಯೆಯೆಂದರೆ - ಅವಳು ಅದಕ್ಕೆ ಒಪ್ಪಲಿಕ್ಕಿಲ್ಲ" ಎಂದನು.