"ಕೊನೆ ಗಳಿಗೆಯ ಅರಿವು
ಒಬ್ಬ ಮಹಿಳೆಯ ಗಂಡನು ತುಂಬಾ ದಿನಗಳಿಂದ ಕೋಮಾ ಸ್ಥಿತಿಗೆ ಹೋಗಿದ್ದನು. ಆದರೂ ಅವಳು ಪ್ರತಿ ದಿನ ಅವನ ಹತ್ತಿರವೇ ಇದ್ದು ಸಂತೈಸಿ, ಆರೈಕೆ ಮಾಡುತ್ತಿದ್ದಳು. ಒಂದು ದಿನ, ಅವನು ಅವಳನ್ನು
ಬಳಿ ಕರೆದನು. ಅವನ ಆಣತಿಯಂತೆ ಅವನ ಹತ್ತಿರಕ್ಕೆ ಹೋದಳು. ""ಇದು ಏನು ಗೊತ್ತಾ? ನನ್ನ ಎಲ್ಲಾ ಅಹಿತವಾದ ಸ್ಥಿತಿಯಲ್ಲಿ ನೀನು ನನ್ನೊಂದಿಗೆ ಸಹಕರಿಸಿದ್ದಿ. ನನಗೆ ಬೆಂಕಿ ತಾಗಿದಾಗ ನೀನು ನನಗೆ ಬೆನ್ನೆಲುಬಾಗಿ ನಿಂತೆ. ನನ್ನ ವ್ಯವಹಾರದಲ್ಲಿ ನಷ್ಟವಾದಗಲೂ ಅಲ್ಲಿ ನೀನೂ ಇದ್ದಿ. ನನಗೆ ಗುಂಡು ತಾಗಿದಾಗಲೂ, ನೀನು ನನ್ನ ಹತ್ತಿರವೇ ಇದ್ದಿ. ನಮ್ಮ ಮನೆಯನ್ನು ನಾವು ಕಳೆದುಕೊಂಡಾಗಲೂ ನನಗೆ ಬೆಂಬಲವನ್ನು ನೀಡಿದೆ. ನನ್ನ ಆರೋಗ್ಯವು ಹದಗೆಡಲು ಪ್ರಾರಂಭವಾಗಿದ್ದರಿಂದಲೂ ನೀವು ನನ್ನ ಬಳಿಯಲ್ಲಿಯೇ ಇದ್ದಿಯಾ. ಏನಿದು"" ಎಂದು ಕೇಳಿದನು.
ಅವಳು ನಿಧಾನವಾಗಿ ""ಏನು ತಿಳಿದಿಲ್ಲ"" ಎಂದು ಉಸುರಿದಳು. ಅದಕ್ಕೆ ಅವನು ""ನಿನ್ನ ಸಾಮಿಪ್ಯವೇ ನನಗೆ ಕೆಟ್ಟದಾಗಿರಬೇಕು"" ಎಂದನು."