ಹೆಂಡತಿ ಗಂಡನಿಗೆ " ನೀವು ಯಾವಾಗಲೂ ನಿಮ್ಮ ಪರ್ಸ್‌ನಲ್ಲಿ ನನ್ನ ಫೋಟೋವನ್ನು ತೆಗೆದುಕೊಂಡು ಹೋಗುತ್ತಿರಲ್ಲಾ ಏಕೆ?" ಗಂಡ ಉತ್ತರಿಸಿದ " ಯಾವಾಗಲಾದರೂ ಏನಾದರೂ ಸಮಸ್ಯೆಯಿದ್ದಾಗ ನಾನು ನಿನ್ನ ಫೋಟೋವನ್ನು ನೋಡುತ್ತೇನೆ ಮತ್ತು ಕ್ಷಣದಲ್ಲೇ ಸಮಸ್ಯೆ ಮಂಗಮಾಯವಾಗುತ್ತದೆ" ಆಗ ಪತ್ನಿ ಹೇಳುತ್ತಾಳೆ "ನೋಡಿ ನನ್ನಲ್ಲಿ ಎಷ್ಟು ಶಕ್ತಿ ಇದೆ". ಗಂಡ ಹೇಳಿದ "ಹೌದು, ನಿನ್ನ ಚಿತ್ರವನ್ನು ನೋಡಿ ನಾನು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತೇನೆ, ಇದಕ್ಕಿಂತ ದೊಡ್ಡದಾದ ಸಮಸ್ಯೆ ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು". ಹೆಂಡತಿಯ ಮುಖ ಇಂಗುತಿಂದ ಮಂಗನಂತಾಗಿತ್ತು.